Skip to main content

ಹರಿಹರ ಅಭೇದ

 ಹರಿಹರ ಅಭೇದ 

ಭಗವಾನ್‌ ನಾರಾಯಣನು ತನ್ನ ದಿವ್ಯ ವೈಕುಂಠದಲ್ಲಿ ನಿದ್ರಿಸುತ್ತಿದ್ದಾಗ 

ಕೋಟಿಕೋಟಿ ಚಂದ್ರರ ಕಾಂತಿಯಿಂದ ಯುಕ್ತನೂ, ತ್ರಿಶೂಲ, ಡಮರು 

ಧಾರಿಯೂ ಸ್ವರ್ಣಾಭೂಷಣಗಳಿಂದ ವಿಭೂಷಿತನೂ ಸುರೇಂದ್ರವಂದಿತನೂ 

ಅಣಿಮಾದಿ ಸಿದ್ದಿಗಳಿಂದ ಸುಸೇವಿವತನೂ ಆದ ತ್ರಿಲೋಚನ ಭಗವಾನ್‌ ಶಿವನು 

ನೃತ್ಯ ಮಾಡತೊಡಗಿದ್ದನ್ನು ಸ್ವಪ್ನದಲ್ಲಿ ಕಂಡನು. ಆಗ ಅವನು ಎಚ್ಚತ್ತು, ಭಗವತಿ 

ಲಕ್ಷ್ಮೀದೇವಿಗೆ ಈ ಸಂಗತಿಯನ್ನು ತಿಳಿಸಿ, ತನ್ನ ಸ್ಮರಣೆ ಮಾಡುತ್ತಿರುವ ಕೈಲಾಸ ಪತಿಯನ್ನು ಭೆಟ್ಟಿಯಾಗಬೇಕೆಂಬ ಇಚ್ಛೆಯಿಂದ ಕೈಲಾಸಕ್ಕೆ ಪತ್ನೀಸಹಿತನಾಗಿ 

ತೆರಳಿದನು. ಆಗ ಅವನಿಗೆ ಮಾರ್ಗದಲ್ಲಿಯೆ ಭಗವಾನ್‌ ಚಂದ್ರಶೇಖರನು ಭಗವತಿ 

ಉಮಾದೇವಿಯೊಡನೆ ದರ್ಶನ ಕೊಟ್ಟನು. ಶಿವನ ಸ್ವಪ್ನದಲ್ಲಿ ಭಗವಾನ್‌ ವಿಷ್ಣುವು 

ದರ್ಶನ ಕೊಟ್ಟದ್ದರಿಂದ ಅವನು ವಿಷ್ಣುವಿನ ಭೆಟ್ಟಿಗಾಗಿ ಕೈಲಾಸದಿಂದ ವೈಕುಂಠಕ್ಕೆ 

ಹೊರಟನು. ಅವರಿಬ್ಬರೂ ಆನಂದದಿಂದ ಮಾತಾಡತೊಡಗಿದರು. ಇಬ್ಬರೂ 

ತಮ್ಮ ತಮ್ಮ ಸ್ವಪ್ನದ ಸಂಗತಿಯನ್ನು ತಿಳಿಸಿದರು. ಇಬ್ಬರ ನೇತ್ರಗಳಲ್ಲಿಯೂ 

ಆನಂದಾಶ್ರುಗಳು ಹರಿಯತೊಡಗಿದವು. ಆಗ ಪರಸ್ಪರರು ತಮ್ಮ ಲೋಕಕ್ಕೆ 

ಬರಬೇಕೆಂದು ಆಗ್ರಹದಿಂದ ಹೇಳತೊಡಗಿದರು. ಅವರ ಸಂಭಾಷಣೆಯನ್ನು ಕೇಳಿ 

ಭಗವತಿ ಉಮಾದೇವಿಯು ಉಭಯತರನ್ನುದ್ದೇಶಿಸಿ ಮಾತಾಡತೊಡಗಿದಳು : 

"ನಾಥಾ, ಕೇಶವಾ, ನಿಮ್ಮಿಬ್ಬರ ನಿಶ್ಚಲ ಪ್ರೇಮವನ್ನು ಕಂಡು ನಾನು 

ನಿರ್ಧರಿಸಿರುವದೇನೆಂದರೆ, ನಿಮ್ಮಿಬ್ಬರ ನಿವಾಸಸ್ಥಾನಗಳು ಭಿನ್ನ ಭಿನ್ನವಾಗಿರು 

ವದಿಲ್ಲ. ವೈಕುಂಠವೇ ಕೈಲಾಸವು, ಕೈಲಾಸವೇ ವೈಕುಂಠವು. ನಿಮ್ಮಿಬ್ಬರ ನಾಮಗಳೂ 

ದೇಹಗಳೂ ಬೇರೆ ಬೇರೆಯಾಗಿದ್ದರೂ ಆತ್ಮವು ಒಂದೇ ಆಗಿದೆ. ನಿಮ್ಮಿಬ್ಬರ 

ಭಾರ್ಯೆಯರೂ ಬೇರೆ ಬೇರೆಯಲ್ಲ; ಇಬ್ಬರೂ ಒಬ್ಬರೇ ಆಗಿರುವೆವು. ಇವಳು 

ಶ್ರೀಲಕ್ಷಿ ಯು; ನಾನೂ ಶ್ರೀಲಕ್ಷಿ ಯಾಗಿರುವೆನು. ನಾನು ಶ್ರೀಉಮೆಯು; 

ಇವಳೂ ಶ್ರೀಉಮೆಯಾಗಿರುವಳು. ನಿಮ್ಮಿಬ್ಬರಲ್ಲಿ ಭೇದವನ್ನು ಕಾಣುವವರು 

ನಿಶ್ಚಯವಾಗಿ ಪತನ ಹೊಂದುವರು. ನೀವಿಬ್ಬರೂ ನಿಮ್ಮ ನಿಮ್ಮ ಲೋಕಕ್ಕೆ 

ಹೊರಡಿರಿ. ಮಹೇಶ್ವರನು ತಾನು ವಿಷ್ಣುರೂಪದಿಂದ ವೈಕುಂಠಕ್ಕೆ ತೆರಳುವೆನೆಂದೂ 

ವಿಷ್ಣುವು ತಾನು ಶಿವರೂಪದಿಂದ ಕೈಲಾಸಕ್ಕೆ ತೆರಳುವೆನೆಂದೂ ಭಾವಿಸಿಬಿಟ್ಟರೆ 

ಸಮಸ್ಯೆಯೇ ಬಗೆಹರಿಯುವದು. ಒಂದೇ ನೀರು ಎರಡು ಪಾತ್ರೆಗಳಲ್ಲಿದ್ದ ಹಾಗೆ 

ನೀವು.' 

ಭಗವತಿ ಉಮಾದೇವಿಯು ಹೀಗೆ ಹೇಳಿದ ಕೂಡಲೇ ಹರಿ-ಹರರು 

ನಕ್ಕರು. ಆಗ ಶಿವನು “ನನ್ನ ಹೃದಯದಲ್ಲಿ ವಿಷ್ಣುವಿರುವನು; ವಿಷ್ಣುವಿನ ಹೃದಯಲ್ಲಿ 

ನಾನಿರುವೆನು. ನಮ್ಮಿಬ್ಬರಲ್ಲಿ ಅಭೇದವನ್ನು ಕಲ್ಪಿಸದವರು ನನಗೆ ಪ್ರಿಯರಾಗುವರು. 

ವಿಷ್ಣುವೇ, ನೀನು ರುದ್ರನ ಧ್ಯೇಯವಾಗಿರುವೆ; ರುದ್ರನು ನಿನ್ನ ಧ್ಯೇಯ 

ವಾಗಿರುವನು. ರುದ್ರನ ಭಕ್ತನಾಗಿ ನಿನ್ನನ್ನು ನಿಂದಿಸುವವನು ಎಲ್ಲಪುಣ್ಯವನ್ನು ನಾಶ 

ಮಾಡಿಕೊಳ್ಳುವನು.'

ಹೀಗೆ ಸದಾಶಿವನು ಹೇಳಿದ ಬಳಿಕ ಇಬ್ಬರೂ ಪರಸ್ಪರ ನಿರೋಪ ಪಡೆದು 

ತಮ್ಮ ತಮ್ಮ ಲೋಕಗಳಿಗೆ ತಮ್ಮ ತಮ್ಮ ಭಾರ್ಯಾಸಮೇತರಾಗಿ ತೆರಳಿದರು. 

ಉಮಾ-ಮಹೇಶ್ವರರೂ ಲಕ್ಷಿ - ವಿಷ್ಣುವೂ ಅಭಿನ್ನರಾಗಿರುವರೆಂಬ ಸಂಗತಿಯು 

ಜಗದ್ವಿಖ್ಯಾತವಾಯಿತು. ಶ್ರೀಕೃಷ್ಣದ್ವೈಪಾಯನ ವೇದವ್ಯಾಸನ ಶಿಷ್ಯನಾದ ಸೂತ 

ಪುರಾಣಿಕನು ಶೌನಕಾದಿಮುನಿಗಳಿಗೆ ಇಪ್ಪತ್ತುನಾಲ್ಕು ಸಾವಿರ ಶ್ಲೋಕವುಳ್ಳ ಹಾಗೂ 

ಏಳು ಸಂಹಿತೆಗಳಿಂದ ಕೂಡಿದ ಶಿವಪುರಾಣವನ್ನು ಉಪದೇಶಿಸಲು ಪ್ರಾರಂಭಿಸಿ 

ದನು. ಆಗ ಸೂತಪುರಾಣಿಕನು ಶಿವಪುರಾಣ ಶ್ರವಣ ಮಾಡಿ ಉದ್ದಾರ ಹೊಂದಿದ 

ದೇವರಾಜನ ಹಾಗೂ ಚಂಚುಲಾ ಎಂಬವಳ ಇತಿಹಾಸವನ್ನು ಅವರಿಗೆ ಹೇಳ 

ತೊಡಗಿದನು. 

ಪ್ರಾಚೀನ ಕಾಲದಲ್ಲಿ ಕಿರಾತರ ನಗರವಾಸಿಯಾಗಿದ್ದ ದೇವರಾಜ 

ಬ್ರಾಹ್ಮಣನು ವೈದಿಕಧರ್ಮವಿಮುಖನಾಗಿ ವೈಶ್ಯವೃತಿಯಿಂದ ಉಪಜೀವನ 

ನಡೆಯಿಸಿದ್ದನು. ಅವನು ಜನರನ್ನು ಮೋಸಗೊಳಿಸಿ ಅಪಾರ ಧನಸಂಚಯ 

ಮಾಡಿದ್ದರೂ ತನ್ನ ಧನವನ್ನು ಧರ್ಮಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದಿಲ್ಲ. 

ದೇವರಾಜ ದ್ವಿಜನು ವೇಶ್ಯಾಗಾಮಿಯೂ ಧರ್ಮಬ್ರಷ್ಟನೂ ಆಗಿದ್ದನು. ಒಮ್ಮೆ 

ಅವನು ಪ್ರತಿಷ್ಠಾನ ನಗರಿಗೆ ಹೋದನು. ಅಲ್ಲಿಗೆ ಹೋದ ಕೂಡಲೆ ಅವನು ಜ್ವರ 

ಬಾಧೆಯಿಂದ ಬಳಲಿದವನಾಗಿ ಅಲ್ಲಿಯ ಒಂದು ಶಿವಾಲಯದಲ್ಲಿ ವಸತಿ 

ಮಾಡಿದನು. ಅಲ್ಲಿ ಅನೇಕ ಸಾಧು-ಸಂತರು ಇದ್ದರು. ಆ ದೇವಸ್ಥಾನದಲ್ಲಿ 

ಶಿವಪುರಾಣದ ಪ್ರವಚನವು ನಡೆದಿತ್ತು. ದೇವರಾಜನು ನಿತ್ಯವೂ ಪಾವನಕರ 

ಪುರಾಣ ಶ್ರವಣ ಮಾಡತೊಡಗಿದನು. ಹೀಗೆ ಒಂದು ಮಾಸ ಕಳೆಯುವಷ್ಟರಲ್ಲಿ 

ಅವನ ಪ್ರಾಣೋತ್ಕಮಣವಾಯಿತು. ಯಮರಾಜನ ದೂತರು ಅವನನ್ನು 

ಯಮಪುರಿಗೆ ಕರೆದೊಯ್ದರು. ಆಗ ಭಗವಾನ್‌ ಶಿವನ ಪಾರ್ಷದರು ಅಲ್ಲಿಗೆ 

ಬಂದರು. ದೇವರಾಜನು ಮಹಾಪಾತಕವನ್ನು ನಾಶಗೊಳಿಸುವ ಶಿವಪುರಾಣ 

ಶ್ರವಣ ಮಾಡಿರುವದರಿಂದ ಅವನ ಪಾತಕವು ನಾಶವಾಗಿರುವದು. ಆದುದರಿಂದ 

ಅವನನ್ನು ಶಿವಲೋಕಕ್ಕೆ ಕರೆದೊಯ್ಯಲು ತಾವು ಬಂದಿರುವೆವೆಂದು ಪಾರ್ಷದರು 

ಯಮರಾಜನಿಗೆ ತಿಳಿಸಿದರು. ಧರ್ಮರಾಜನು ಅವನನ್ನು ಪಾರ್ಷದಗಣದ 

ಸ್ವಾಧೀನದಲ್ಲಿ ಕೊಟ್ಟನು. ಪಾರ್ಷದರು ಪರಿಶುದ್ಧನಾಗಿದ್ದ ಆ ಬ್ರಾಹ್ಮಣನನ್ನು 

ವಿಮಾನದಲ್ಲಿಕುಳ್ಳಿರಿಸಿಕೊಂಡು ಕೈಲಾಸಕ್ಕೆ ಬಂದು ಭಗವಾನ್‌ ಶಂಕರನ ಸ್ವಾಧೀನಕ್ಕೆ

ಕೊಟ್ಟರು. ಶಿವಪುರಾಣ ಶ್ರವಣ ಮಾಡಿದ ಪುಣ್ಯದಿಂದ ಅವನು ಕೈಲಾಸ 

ವಾಸಿಯಾದನು. 

ಸಮುದ್ರ ತೀರದ ನಿಕಟವರ್ತಿಪ್ರದೇಶದಲ್ಲಿ ಬಾಷ್ಕಲವೆಂಬ ಗ್ರಾಮ 

ವಿತ್ತು. ಅಲ್ಲಿ ವೈದಿಕ ಧರ್ಮವಿಮುಖನೂ ಖಳನೂ ಕುಟಿಲವೃತ್ತಿಯವನೂ ನೀತಿ 

ಬಾಹಿರನೂ ಆದ ಬಿಂದುಗನೆಂಬ ಬ್ರಾಹ್ಮಣನಿದ್ದನು. ಅವನ ಪತ್ನಿಯಾದ 

ಚಂಚುಲೆಯು ಪರಮ ರೂಪವತಿಯಾಗಿದ್ದಳು. ಅವಳು ಸದಾಚಾರಿಯೂ 

ಸಾಧ್ವೀಮಣಿಯೂ ಆಗಿದ್ದಳು. ಹೀಗಿದ್ದರೂ ಬಿಂದುಗನು ವೇಶ್ಯಾಗಾಮಿಯಾಗಿ 

ಪತ್ನಿಯನ್ನು ತಿರಸ್ಕರಿಸಿದನು. ಪತಿಯು ಅಧಮನೂ ಕುಕರ್ಮಿಯೂ ಆದುದನ್ನು 

ನೋಡಿ ಆ ಸಾಧ್ವಿಯು ಕ್ಷೇಶಗೊಂಡಳು. ಅವಳು ದೀರ್ಥಕಾಲದ ವರೆಗೆ 

ಧರ್ಮಬಭ್ರಷ್ಟಳಾಗದೆ ತನ್ನ ಸತೀತ್ವವನ್ನು ಕಾಯ್ದುಕೊಂಡಿದ್ದಳು. ಆದರೆ ದುರಾಚಾರಿ 

ಪತಿಯು ತನ್ನನ್ನು ಪೂರ್ಣವಾಗಿ ಮರೆತದ್ದರಿಂದ ಅವಳು ನೀತಿಭ್ರಷ್ಟಳಾದಳು. 

ಕೆಲವು ಕಾಲದಲ್ಲಿ ಬಿಂದುಗನು ಮೃತ್ಯುವಶನಾದನು. ಅವನು ತನ್ನ ಪಾತಕಕ್ಕಾಗಿ 

ನರಕವಾಸವನ್ನನುಭವಿಸಿ ಪಿಶಾಚಿಯಾದನು. 

ದೈವಯೋಗದಿಂದ ಒಮ್ಮೆ ಪುಣ್ಯಪರ್ವವು ಪ್ರಾಪವಾಯಿತು. 

ಚಂಚುಲೆಯು ತೀರ್ಥಸ್ನಾನಕ್ಕಾಗಿ ಶ್ರೀಕ್ಷೇತ್ರ ಗೋಕರ್ಣಕ್ಕೆ ಹೋದಳು. ಅವಳು 

ತೀರ್ಥಸ್ನಾನ ಮಾಡಿ ಶಿವದರ್ಶನಕ್ಕಾಗಿ ಶಿವಾಲಯವನ್ನು ಪ್ರವೇಶಿಸಿದಳು. 

ದೇವದರ್ಶನ ಪಡೆದು ಅಲ್ಲಿ ನಡೆದಿದ್ದ ಶಿವಕಥಾ ಪ್ರವಚನ ಕೇಳಲು ಅಲ್ಲಿ ಕುಳಿತಳು. ವ್ಯಭಿಚಾರಿಣಿಯರಾದ ಸ್ತ್ರೀಯರು ಯಮಲೋಕದಲ್ಲಿ ಭೀಕರ 

ದಂಡನೆಗೆ ಗುರಿಯಾಗುವರೆಂದು ಬ್ರಾಹ್ಮಣನು ತನ್ನ ಪ್ರವಚನದಲ್ಲಿ ಹೇಳಿದನು. 

ವೈರಾಗ್ಯವು ಉತ್ಪನ್ನವಾಗುವಂತೆ ಅವನು ಶ್ರೋತೃಗಳಿಗೆ ಪುರಾಣವನ್ನು 

ಹೇಳತೊಡಗಿದ್ದನು. ಅವನು ಹೇಳಿದ ಯಮಯಾತನೆಯ ಸ್ವರೂಪವನ್ನು ತಿಳಿದ 

ಚಂಚುಲೆಯು ಭಯಭೀತಳಾದಳು. ಪ್ರಾಯದ ಮದದಲ್ಲಿ ತನ್ನಿಂದ ಘಟಿಸಿದ 

ದುರಾಚರಣೆಗಾಗಿ ಅವಳು ಪಶ್ಚಾತ್ರಾಪಪಡತೊಡಗಿದಳು. ಕಥಾ ಸಮಾಪ್ತಿಯಾದ 

ಬಳಿಕ ಶ್ರೋತೃಗಳೆಲ್ಲರೂ ಅಲ್ಲಿಂದ ಹೊರಟುಹೋದರು. ಚಂಚುಲೆಯು 

ಪುರಾಣವಾಚನ ಮಾಡುವ ಬ್ರಾಹ್ಮಣನ ಬಳಿಗೆ ಹೋಗಿ ವಂದಿಸಿ ತನ್ನಿಂದ ಘಟಿಸಿದ 

ಪ್ರಮಾದಗಳನ್ನು ವಿವರಿಸಿ, ತನ್ನನ್ನು ಉದ್ದರಿಸಬೇಕೆಂದು ಪ್ರಾರ್ಥಿಸಿದಳು.

ಬಳಿಕ ಬ್ರಾಹ್ಮಣನು : “ಚಂಚುಲೆ, ನೀನು ಅಂಜಬೇಡ, ಕೃತ ಕರ್ಮದ 

ಬಗ್ಗೆ ನೀನು ಪಶ್ಚಾತ್ತಾಪ ಹೊಂದಿರುವೆ. ಭಗವಾನ್‌ ಶಂಕರನ ವೈರಾಗ್ಯಯುಕ್ತ 

ಶಿವಪುರಾಣ ಶ್ರವಣದಿಂದ ನಿನ್ನಲ್ಲಿ ಸದ್ಭುದ್ದಿಯು ಪ್ರಾದುರ್ಭವಿಸಿದೆ. ನೀನು 

ದಯಾಘನನಾದ ಶಿವನಿಗೆ ಶರಣು ಹೋಗಬೇಕು. ಪಶ್ಚಾತ್ತಾಪವು ಎಲ್ಲ ವಿಧದ 

ಪಾತಕಗಳಿಗೆ ಪ್ರಾಯಶ್ಚಿತ್ತವಾಗಿದೆ. 

ಪಶ್ಚಾತ್ತಾಪಃ ಪಾಪಕೃತಾ ಪಾಪಾನಾಂ ನಿಷ್ಕೃತಿಃ ಪರಾ | 

ಸರ್ವೇಷಾಂ ವರ್ಣಿತಂ ಸದ್ದಿಃ ಸರ್ವಪಾಪವಿಶೋಧನಂ ॥ 

ಪಶ್ಚಾತ್ಪಾಪೇನೈವ ಶುದ್ದಿ; ಪ್ರಾಯಶ್ಚಿತ್ತಂ ಕರೋತಿ ಸಃ | 

ಯಥೋಪದಿಷ್ಟಂ ಸದ್ದಿರ್ಜಿ ಸರ್ವಪಾಪವಿಶೋಧನಂ ॥ 

(ಶಿವಪುರಾಣ ಮಹಾತ್ಮೆ ಅಧ್ಯಾಯ ೩ ಶ್ಲೋಕ ೫-೬) 

ಚಂಚುಲೆ, ತನ್ನ ಕುಕೃತ್ಯಕ್ಕಾಗಿ ಪಶ್ಚಾತಾಪ ಹೊಂದಿದವನು ಅವಶ್ಯವಾಗಿ 

ಉತ್ತಮ ಗತಿಯನ್ನು ಹೊಂದುವನು. ಶಿವಪುರಾಣ ಕಥಾಶ್ರವಣದಿಂದ ಚಿತ್ತ 

ಶುದ್ಧಿಯಾಗಿ ನೀನು ಪುನೀತಳಾಗುವೆ. ಶುದ್ಧಚಿತನಾದ ಮನುಷ್ಯನ ಹೃದಯ 

ಮಂದಿರದಲ್ಲಿ ಉಮಾ- ಶಂಕರರು ವಿರಾಜಮಾನರಾಗಿರುವರು. ನೀನು ಭಕ್ತಿ 

ಭಾವಗಳಿಂದೊಡಗೂಡಿ ಶಿವಕಥಾ ಶ್ರವಣ ಮಾಡು. ಅದರಿಂದ ನಿನಗೆ 

ಖಂಡಿತವಾಗಿ ಮುಕ್ತಿಯು ದೊರೆಯುವುದು” ಎಂದನು. 

ಚಂಚುಲೆಯು ಧನ್ಯತೆಯನ್ನು ವ್ಯಕ್ತಪಡಿಸಿದಳು. ಅವಳು ನಿತ್ಯವೂ ಶಿವ 

ಪುರಾಣ ಶ್ರವಣ, ಶಿವಧ್ಯಾನದಲ್ಲಿ ತೊಡಗಿದಳು. ಸಮಯವೊದಗಿತು. ಭಕ್ತಿ, 

ವೈರಾಗ್ಯಯುಕ್ತಳಾದ ಅವಳು ಯಾವ ಯಾತನೆಯೂ ಇಲ್ಲದೆ ಭೌತಿಕ ಶರೀರವನ್ನು 

ತ್ಯಜಿಸಿದಳು. ಶಿವನು ಕಳುಹಿಸಿದ ವಿಮಾನವು ಅಲ್ಲಿಗೆ ಬಂದಿತು. ಶಿವಪಾರ್ಷದರು 

ಅವಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ಶಿವನ ಸ್ವಾಧೀನ ಪಡಿಸಿದರು. 

ಶಿವನು ಅವಳನ್ನು ಭಗವತಿ ಜಗದಂಬೆಯ ಕಡೆಗೆ ಕಳುಹಿಸಿದನು. ಅವಳು 

ಪಾರ್ವತಿಯ ಸಖಿಯಾದಳು. ತನ್ನ ಪತಿಯಾದ ಬಿಂದುಗನಿಗೆ ಅವಳು ತುಂಬುರು 

ಮುನಿಯ ಸಹಾಯದಿಂದ ಪಿಶಾಚಿ ಜನ್ಮದಿಂದ ಮುಕ್ತಗೊಳಿಸಿ ಶಿವಸಾನ್ನಿಧ್ಯವನ್ನು 

ದೊರಕಿಸಿಕೊಟ್ಟಳು.

ತೇ ಜನ್ಮಭಾಜಃ ಖಲು ಜೀವಲೋಕೇ ಯೇ ವೈ 

ಸದಾ ಧ್ಯಾಯಂತಿ ವಿಶ್ವನಾಥಂ | 

ವಾಣೀಗುಣಾನ್‌ ಸೌತಿ ಕಥಾಂ ಶೃಣೋತಿ ಶ್ರೋತ್ರದ್ವಯಂ ತೇ 

ಭವಮುತರಂತಿ 

Comments

Popular posts from this blog

आदि शंकराचार्य नारी नरक का द्वार किस संदर्भ में कहा हैं?

कुछ लोग जगद्गुरू आदि शंकराचार्य जी पर अक्षेप करते हैं उन्होंने नारि को नरक का द्वार कहा हैं वास्तव में नारी को उन्होंने नारी को नरक के द्वार नहीं कहते परन्तु यहां इसके अर्थ नारी नहीं माया करके होता हैं इनके प्रमाण शास्त्रों में भी बताया गया हैं अब विश्लेषण निचे दिया हैं इसके प्रकरण कर्म संन्यास में रत मनुष्यों के लिए यहां नारी के अर्थ स्त्री नहीं होता हैं उचित रूप में ये माया के लिए प्रयुक्त होता हैं नीचे प्रमाण के साथ बताया गया हैं संसार ह्रुत्कस्तु निजात्म बोध : |   को मोक्ष हेतु: प्रथित: स एव ||   द्वारं किमेक नरकस्य नारी |   का सर्वदा प्राणभृतामहींसा ।।3।। मणि रत्न माला शिष्य - हमें संसार से परे कौन ले जाता है? गुरु - स्वयं की प्राप्ति एक ही जो हमें संसार से परे ले जाती है और व्यक्ति को तब संसार से अलग हो जाता है। यानी आत्म बोध। शिष्य - मोक्ष का मूल कारण क्या है? गुरु- प्रसिद्ध आत्म बोध या आत्म अहसास है। शिष्य - नरक का द्वार क्या है? गुरु - महिला नरक का द्वार है। शिष्य - मोक्ष के साथ हमें क्या सुविधाएं हैं? गुरु - अहिंसा (अहिंसा)। अपके प्रश्न का उत्तर देने से पहले हमें

क्या मुर्ति पूजा वेद विरुद्ध है

आज कल आर्य समाजी मुल्ले ईसाई मुर्ति पूजा वेद विरुद्ध बोलते हैं इनके एक श्लोक न तस्य प्रतिमा अस्ति ये आधा श्लोक हैं इसके सही अर्थ इस प्रकार हैं दयानंद जी संस्कृत कोई ज्ञान नहीं था ईसाई प्रभावित होकर विरोध किया था इन पर विश्वास न करें।  न तस्य प्रतिमा अस्ति यस्य नाम महाद्यश:। हिरण्यगर्भऽ इत्येष मा मा हिंन्सिदितेषा यस्मान्न जातऽ इतेषः।। यजुर्वेद ३२.३  स्वयम्भु ब्रह्म ऋषि:  मन्त्रदेवता हिरण्यगर्भ: (विष्णु , नारायण,) परमात्मा देवता  भावार्थ: न तस्य गायत्री द्विपदा तस्य पुरुषस्य ( महा नारायणस्य) किञ्चद्वस्तु प्रतिमा प्रतिमानमुपनां नास्ति यस्य नाम एव प्रसिद्धं महाद्यशः अस्य प्रमाणं वेदस्य हिरण्यगर्भ ऽइत्येष मा मा हिंन्सिदितेष यस्मिान्न जातऽइतेषः इत्यादयः श्रुतिषु प्रतिपादितः इति अस्य यर्जुवेदमन्त्रस्य  अर्थः भवति।   न तस्य पुरुषस्य (महा नारायणस्य) प्रतिमा प्रतिमानं भूतं किञ्चिद्विद्यते - उवट भाष्य न तस्य पुरुषस्य ( महानारायणस्य) किञ्चद्वस्तु प्रतिमा प्रतिमानमुपनां नास्ति - महीधर भाष्य यस्य नाम एव प्रसिद्धम् महाद्यश तस्य नाम इति महानारयण उपनिषदे अपि प्रतिपादिताः  हिंदी अनुवाद: उस महा

धर्म की परिभाषा

हम सब के मन में एक विचार उत्पन्न होता हैं धर्म क्या हैं इनके लक्षण या परिभाषा क्या हैं। इस संसार में धर्म का समादेश करने केलिए होता हैं लक्ष्य एवं लक्षण सिद्ध होता हैं लक्षण धर्म के आचरण करने के नियम हैं जैसे ये रेल गाड़ी को चलाने केलिए पटरी नियम के रूप कार्य करते उसी प्रकार धर्मीक ग्रन्थों में धर्मा अनुष्ठान   नियम दिया हैं  इसके विषय में वेद पुराण स्मृति तथा वैशेषिक सुत्र में इस प्रकार प्रतिपादित किया गया हैं। वेद ,पुराण, वैशेषिक  एवं स्मृतियों में धर्म के बारे क्या कहा हैं १) या हि चोदना धर्मस्य लक्षणं सा स्वविषये नियुञ्जानैव पुरूषमवबोध्यति ब्रह्म चोदन तु पुरुषं अवबोधयतैव केवलं अववोधस्य चोदनाजन्यत्वात् न पुरूषोऽवबोधे नियुज्यते यथा अक्षार्थसंनिकर्षेण अर्थावबोधे तद्वत्  (ब्रह्म सुत्र ) यहां पर धर्म जिज्ञासा और ब्रह्म जिज्ञासा में भिन्नता   अवश्य होता हैं धर्म तु कर्मना पष्ठी कहा है अर्थात इस कार्य जगत हमें वेद के पूरक  वचन के अनुसार धर्म के कार्य अवश्य करें  लेकिन ब्रह्म को केवल जानना होता हैं उसके साक्षात्कार से ब्रह्म का चोदन (समादेश) सिद्ध  होता है ( अर्थात श्रृति प्रमाण के प्र